ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಬೇಸಿಗೆ ಶಿಬಿರ ಉದ್ಘಾಟನೆ

 ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ಅಸೋಸಿಯೇಷನ್ ವತಿಯಿಂದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಕ್ರೀಡ ಇಲಾಖೆ ದಕ್ಷಿಣ ಕನ್ನಡ ಇವರ ಸಹಭಾಗಿತ್ವದಲ್ಲಿ 2 ತಿಂಗಳ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು.



 ಉದ್ಘಾಟನೆಯನ್ನು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಕ್ರೀಡಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗುರುಪ್ರಸಾದ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು, ಮುಖ್ಯ ಅತಿಥಿಯಾಗಿ ಶ್ರೀ ಅಶೋಕ್ ಪೂವಾಯ, ಕದ್ರಿ ಐವನ್ ಪಿಂಟೋ, ಹಾಗೂ ಅಸೋಸಿಯೇಷನ್ನ ಉಪಾಧ್ಯಕ್ಷರಾದ ಅಶೋಕ್ ಹೆಗಡೆ, ಸಮಿತಿಯ ಸದಸ್ಯರಾದ ನೂರು ಮಹಮ್ಮದ್, ವೇದಿಕೆಯಲ್ಲಿದ್ದರು.


 

 ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ  ಪ್ರಶಸ್ತಿ ಪಡೆದ17 ವರ್ಷದ ಒಳಗಿನ ಆಟಗಾರರಾದ ಸಾನ್ವಿ,ಆದಿತ್ಯ, ಕಿಯನ್ ಪಿ.ಸಿ, ಅನನ್ಯ,ಅವಿನಾಶ್,ಕನಿಶ್ ಇವರನ್ನು ಗೌರವಿಸಲಾಯಿತು. ಈ ಶಿಬಿರದಲ್ಲಿ ಸುಮಾರು 90 ಮಕ್ಕಳು ಭಾಗವಹಿಸಿದ್ದಾರೆ. ಅಸೋಸಿಯೇಷನ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಕಾರ್ಯದರ್ಶಿಯಾದ ಸುಪ್ರೀತಾಳ್ವ ಧನ್ಯವಾದ ಸಮರ್ಪಿಸಿದರು, ಹಾಗೂ ಸಮಿತಿಯ ಸದಸ್ಯರಾದ ಡಾಕ್ಟರ್ ಶರತ್ ಕಾರ್ಯಕ್ರಮ ನಿರೂಪಿಸಿದರು.

Post a Comment

Previous Post Next Post